Join our speech-based essay competition and showcase your talent today!

ಧ್ವನಿ ಎತ್ತಿ ಮಾತಾಡಿ
ಭಾಷಣಾಧಾರಿತ ಪ್ರಬಂಧ ಸ್ಪರ್ಧೆಗೆ ಸೇರಿ, ನಿಮ್ಮ ಪ್ರತಿಭೆಯನ್ನು ಇಂದೇ ಹರಿಬಿಡಿ!
ಸ್ಪೀಕ್ ಬೀ ಕುರಿತು
ಪರಂಪರಾ ಸ್ಟುಡಿಯೋಸ್ ನಿಮ್ಮ ಮುಂದೆ ತಂದಿರುವ ಸ್ಪೀಕ್ ಬೀ–2026, ಅಭಿವ್ಯಕ್ತಿಯ ಶಕ್ತಿ ಮತ್ತು ಸಾಮಾಜಿಕ ಚಿಂತನೆಗಳನ್ನು ಆಚರಿಸುವ ಒಂದು ಭಾಷಣಾಧಾರಿತ ಪ್ರಬಂಧ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ 6 ನಿಮಿಷಗಳವರೆಗೆ (ಗರಿಷ್ಠ) ರೆಕಾರ್ಡ್ ಮಾಡಿದ ವೀಡಿಯೊ ಪ್ರಸ್ತುತಿಯ ರೂಪದಲ್ಲಿ ತಮ್ಮ ಆಲೋಚನೆಗಳು, ಮನೋಭಾವಗಳನ್ನು ಮತ್ತು ಸೃಜನಶೀಲತೆಯನ್ನು ಹಂಚಿಕೊಳ್ಳಲು ವೃತ್ತಿಪರ ವೇದಿಕೆಯನ್ನು ಒದಗಿಸುತ್ತಿದೆ.
ಭಾಗವಹಿಸುವವರು ತಮ್ಮ ವಿಭಾಗಕ್ಕೆ ಹೊಂದುವಂತೆ ನೀಡಲಾದ ಆರು ವಿಷಯಗಳಲ್ಲೊಂದನ್ನುಆಯ್ಕೆ ಮಾಡಿ, ತಮ್ಮ ವೀಡಿಯೊ ಚಿತ್ತ್ರೀಕರಿಸಿ, ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸ್ಪೀಕ್ ಬೀ ಯ ಉದ್ದೇಶ — ಸ್ಪಷ್ಟ ಚಿಂತನೆ, ಆತ್ಮವಿಶ್ವಾಸಭರಿತ ವಕ್ತೃತ್ವ ಮತ್ತು ಸಮಾಜ ಸಂಬಂಧಿ ಬರವಣಿಗೆಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಉತ್ತೇಜಿಸುವುದು.
ಪ್ರಮುಖ ಹಂತಗಳು
ನೋಂದಣಿ ಮಾಡಿ
ನಿಮ್ಮ ವಿಭಾಗ ಮತ್ತು ವಿಷಯದ ಆಯ್ಕೆ ಮಾಡಿ
ಮಾರ್ಗಸೂಚಿಗಳನ್ನು ಅನುಸರಿಸಿ 6 ನಿಮಿಷಗಳ ಒಳಗೆ ವೀಡಿಯೊ ರೆಕಾರ್ಡ್ ಮಾಡಿ
ನಮ್ಮ ಪೋರ್ಟಲ್‌ಗೆ ಅಥವಾ ಮೇಲ್ ಮೂಲಕ ನೀಡಲಾದ ಲಿಂಕ್‌ನಲ್ಲಿ ವೀಡಿಯೊ ಅಪ್‌ಲೋಡ್ ಮಾಡಿ
ಮುಂದಿನ ಸುತ್ತುಗಳನ್ನು ಎದುರಿಸಿ
ಪ್ರಶಸ್ತಿ ಹಾಗೂ ಗೌರವಗಳನ್ನು ಪಡೆಯಿರಿ
ಸ್ಪರ್ಧೆಯ ವಿಭಾಗಗಳು
1.ಜೂನಿಯರ್ ವಿಭಾಗ
ಅರ್ಹತೆ: 5ನೇ ತರಗತಿಯಿಂದ 10ನೇ ತರಗತಿಯವರೆಗೆ ಇರುವ ವಿದ್ಯಾರ್ಥಿಗಳು
ಷರತ್ತು: ಪ್ರಸ್ತುತ ಅಧ್ಯಯನದಲ್ಲಿರಬೇಕು
2.ಸೀನಿಯರ್ ವಿಭಾಗ
ಅರ್ಹತೆ: 11ನೇ ತರಗತಿ ಮತ್ತು ಸಮಾನವಾದ ವಿದ್ಯಾಭ್ಯಾಸ (ಐಟಿಐ, ಡಿಪ್ಲೊಮಾ, ನರ್ಸಿಂಗ್ ಇತ್ಯಾದಿ), ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು
ಷರತ್ತು:ಪ್ರಸ್ತುತ ಅಧ್ಯಯನದಲ್ಲಿರಬೇಕು
3.ಸಾಮಾನ್ಯ ವಿಭಾಗ
ಅರ್ಹತೆ: 10 ವರ್ಷಗಳ ಮೇಲೆ ಇರುವ ಯಾರಿಗೂ ಮುಕ್ತ
ಷರತ್ತು: ಪ್ರಸ್ತುತ ಅಧ್ಯಯನದಲ್ಲಿಲ್ಲದವರು






ನಮ್ಮ ಧ್ಯೇಯ
ಶಿಕ್ಷಣ – ಪ್ರತಿಯೊಬ್ಬ ಮಗುವಿನ ಹಕ್ಕು, ಪ್ರತಿಯೊಬ್ಬರ ಅಗತ್ಯ
ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು, ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ವಿವಿಧ ಸಾಮಾಜಿಕ ಸಂಸ್ಥೆಗಳು ನಿರಂತರವಾಗಿ ಶಿಕ್ಷಣವನ್ನು ಬೆಂಬಲಿಸುತ್ತಾ, ಉಚಿತ ಶಿಕ್ಷಣ, ಸಹಾಯಧನದ ಅವಕಾಶಗಳು ಮತ್ತು ವಿದ್ಯಾರ್ಥಿವೇತನಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ಒತ್ತಿಹೇಳುತ್ತಿವೆ.
ಆದರೆ, ಇಂದಿಗೂ ಹೆಚ್ಚಿನ ವಿದ್ಯಾರ್ಥಿವೇತನದ ಮಾನದಂಡಗಳು ಮುಖ್ಯವಾಗಿ ಅಂಕಗಳು, ಜಾತಿ, ಧರ್ಮ, ಆರ್ಥಿಕ ಸ್ಥಿತಿ ಅಥವಾ ಲಿಂಗದ ಆಧಾರದ ಮೇಲೆ ನಿರ್ಧರಿಸಲಾಗುತ್ತವೆ. ನಮ್ಮ ದೃಢ ನಂಬಿಕೆಯ ಪ್ರಕಾರ, ವಿದ್ಯಾರ್ಥಿಯ ಬೌದ್ಧಿಕ ದೃಷ್ಟಿಕೋನ ಮತ್ತು ವಿಮರ್ಶಾತ್ಮಕ ಚಿಂತನೆಗೂ ಸಮಾನವಾದ ಮಹತ್ವ ನೀಡಬೇಕು. ಈ ದೃಷ್ಟಿಯಿಂದಲೇ, ಪರಂಪರಾ ಸ್ಟುಡಿಯೋಸ್ ತನ್ನ ವಿಭಾಗವಾದ “ಸ್ಪೀಕ್ ಬೀ” ಮೂಲಕ ಶಾಲೆಗಳು, ಪ್ರೌಢಶಾಲೆಗಳು, ಪೂರ್ವ-ವಿಶ್ವವಿದ್ಯಾಲಯ, ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅಧ್ಯಯನದಲ್ಲಿಲ್ಲದ ಸಾಮಾನ್ಯ ನಾಗರಿಕರಿಗಾಗಿ ನಿರಂತರವಾಗಿ ಪ್ರಬಂಧ ಮತ್ತು ಭಾಷಣಾಧಾರಿತ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ವಿಜೇತರಿಗೆ ಕೌಶಲ್ಯ ಪ್ರಶಸ್ತಿಗಳು ಮತ್ತು ಹಣಕಾಸು ಸಹಾಯಗಳನ್ನು ನೀಡಿ, ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಅವಕಾಶ ಮಾಡಿಕೊಡುತ್ತಿದೆ.
ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ರೀಲ್‌ಗಳು, ಶಾರ್ಟ್‌ಗಳು ಅಥವಾ ಒಂದೆರಡು ಸಾಲಿನ ಬರಹಗಳಿಗೆ ಮಾತ್ರ ಸೀಮಿತಗೊಳಿಸುತ್ತಿರುವ ಸಂದರ್ಭದಲ್ಲಿ, ಈ ಭಾಷಣಾಧಾರಿತ ಪ್ರಬಂಧ ಸ್ಪರ್ಧೆ, ಅವರು ತಮ್ಮ ಸಾಮಾಜಿಕ ಅರಿವು ಮತ್ತು ಪೀಳಿಗೆಯ ದೃಷ್ಟಿಕೋನವನ್ನು ಬರವಣಿಗೆ ಹಾಗೂ ವಾಕ್ ಪ್ರದರ್ಶನದ ಮೂಲಕ ಅರ್ಥಪೂರ್ಣವಾಗಿ ಅಭಿವ್ಯಕ್ತಿಸಲು ವೇದಿಕೆಯನ್ನು ಒದಗಿಸುತ್ತದೆ. ಈ ಪ್ರಯತ್ನದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳು.
ಸಾಮಾಜಿಕ ಬದ್ಧತೆಯ ಮನೋಭಾವದಿಂದ, ಪರಂಪರಾ ಸ್ಟುಡಿಯೋಸ್ ವಿದ್ಯಾರ್ಥಿಗಳಲ್ಲಿ ಕಲಾ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೇಲೆ ಆಸಕ್ತಿ ಬೆಳೆಸುವುದಕ್ಕೂ ಉತ್ತೇಜಿಸುವುದಕ್ಕೂ ನಿರಂತರವಾಗಿ ಕೆಲಸ ಮಾಡುತ್ತಿದೆ. ನಾಟಕ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ಇತರ ಕಲಾ ಕ್ಷೇತ್ರಗಳನ್ನು ಪ್ರಾಯೋಗಿಕ ಮತ್ತು ಪರಿಣಾಮಕಾರಿ ರೀತಿಯಲ್ಲಿ ಉತ್ತೇಜಿಸುವ ಉದ್ದೇಶದಿಂದ ಸಂಸ್ಥೆ ನಿಯಮಿತವಾಗಿ ನವೀನ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ.
ಬೆಂಗಳೂರುಗಷ್ಟೇ ಸೀಮಿತವಾಗದೆ, ಪರಂಪರಾ ಸ್ಟುಡಿಯೋಸ್ ಭಾರತದಾದ್ಯಂತ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ಪಂಡಿತರು, ಪರಿಣಿತ ತರಬೇತುದಾರರು ಮತ್ತು ಸಲಹಾ ಮಂಡಳಿಗಳನ್ನು ರಚಿಸಿ, ನಾಟಕ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಗುಣಮಟ್ಟದ ತರಬೇತಿ ಮತ್ತು ಅವಕಾಶಗಳನ್ನು ಒದಗಿಸುತ್ತಿದೆ. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕಲೆಯ ಮೇಲಿನ ಅಭಿರುಚಿಯನ್ನು ಪೋಷಿಸಲು ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ.




Speak Bee 2026 – Speech Essay Competition
Organised by Parampara Studios




ಪ್ರತಿಭಾ ಹುಡುಕಾಟ
ನಮ್ಮ ಪ್ರತಿಭಾ ಹುಡುಕಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂದರ್ಶನಗಳು ಮತ್ತು ಮೌಲ್ಯಮಾಪನಗಳಲ್ಲಿ ನಿಮ್ಮ ಅತ್ಯುತ್ತಮತೆಯನ್ನು ತೋರಿಸಿ.
ನೋಂದಣಿ ವಿವರಗಳು
ಕಾರ್ಯಕ್ರಮದ ವಿವರಗಳು, ವಿಷಯಗಳ ಪಟ್ಟಿಗಳು ಮತ್ತು ಪಾವತಿ ಲಿಂಕ್‌ಗಳನ್ನು ಪರಿಶೀಲಿಸಿ — ಸುಲಭವಾಗಿ ನೋಂದಣಿ ಮತ್ತು ಭಾಗವಹಿಸಲು ನೆರವಾಗುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
1.ಸ್ಪೀಕ್ ಬೀ ಸ್ಪರ್ಧೆ ಎಂದರೆ ?
ಸ್ಪೀಕ್ ಬೀ — ಅಭಿವ್ಯಕ್ತಿ, ಚಿಂತನೆ ಮತ್ತು ಸೃಜನಶೀಲತೆಗೆ ಪ್ರೇರಣೆ ನೀಡಲು ರೂಪುಗೊಂಡಿರುವ ವಿಶಿಷ್ಟ ಭಾಷಣಾಧಾರಿತ ಪ್ರಬಂಧ ಸ್ಪರ್ಧೆ. ಭಾಗವಹಿಸುವವರು ತಮ್ಮ ವಿಭಾಗಕ್ಕೆ ಅನುಗುಣವಾಗಿ ನೀಡಲಾದ ಆರು ವಿಷಯಗಳಲ್ಲೊಂದು ಆಯ್ಕೆ ಮಾಡಿ, ಗರಿಷ್ಠ 6 ನಿಮಿಷಗಳವರೆಗೆ ರೆಕಾರ್ಡ್ ಮಾಡಿದ ವೀಡಿಯೋ ರೂಪದಲ್ಲಿ ತಮ್ಮ ಭಾಷಣ/ಪ್ರಬಂಧವನ್ನು ಪ್ರಸ್ತುತಪಡಿಸಬೇಕಾಗುತ್ತದೆ.
2.ನಾನು ಹೇಗೆ ಭಾಗವಹಿಸಬಹುದು?
ಭಾಗವಹಿಸುವವರು ನೀಡಲಾದ ವಿಷಯದ ಮೇಲೆ ವೀಡಿಯೋವನ್ನು ರೆಕಾರ್ಡ್ ಮಾಡಿ, ನಾವು ಒದಗಿಸುವ ಲಿಂಕ್ ಮೂಲಕ ಅದನ್ನು ಅಪ್‌ಲೋಡ್ ಮಾಡಬೇಕು.
ಭಾಗವಹಿಸುವವರು ತಮ್ಮ ಭಾಷಣ/ಪ್ರಬಂಧದ ವೀಡಿಯೋ ರೆಕಾರ್ಡಿಂಗ್ ಅನ್ನು ಸಲ್ಲಿಸುವುದು ಕಡ್ಡಾಯ.
ಗರಿಷ್ಠ ಅವಧಿ: 6 ನಿಮಿಷಗಳು
ವಿಷಯವು ತಮ್ಮ ವಿಭಾಗಕ್ಕೆ ನೀಡಲಾದ ಆರು ವಿಷಯಗಳಲ್ಲೊಂದು ಆಗಿರಬೇಕು.
ಸಲ್ಲಿಕೆಯು ಸಂಪೂರ್ಣವಾಗಿ ಮೂಲ ರಚನೆಯಾಗಿರಬೇಕು; ನಕಲು/ಪ್ಲೇಜರಿಸಮ್ ಕಂಡುಬಂದರೆ ತಕ್ಷಣವೇ ಅನರ್ಹಗೊಳಿಸಲಾಗುವುದು.
ಎಲ್ಲಾ ವೀಡಿಯೋಗಳನ್ನು ಅಧಿಕೃತ ಗಡುವಿನೊಳಗೆ ಸಲ್ಲಿಸಬೇಕು.
3.ಸ್ಪರ್ಧೆಯಲ್ಲಿ ಯಾವ್ಯಾವ ಸುತ್ತುಗಳು ಇವೆ?
ಸ್ಪರ್ಧೆಯಲ್ಲಿ ವೀಡಿಯೋ ಸಲ್ಲಿಕೆಗಳ ನಂತರ ಮೂರು ಮುಖ್ಯ ಸುತ್ತುಗಳು ನಡೆಯುತ್ತವೆ:
ದೂರವಾಣಿ ಸಂದರ್ಶನ (Telephonic Interview)
ಲೈವ್ ವೀಡಿಯೋ ಸಂದರ್ಶನ (Live Video Interview)
ವೇದಿಕೆ ಪ್ರದರ್ಶನ (Stage Performance)
ಈ ಮೂರು ಹಂತಗಳನ್ನು ಯಶಸ್ವಿಯಾಗಿ ಪೂರೈಸಿದರೆ ಮುಂದಿನ ಘೋಷಿತ ಪ್ರಶಸ್ತಿಗಳು ಮತ್ತು ಗೌರವಗಳಿಗೆ ಅರ್ಹರಾಗುತ್ತೀರಿ.
4.ಯಾವ ವಿಷಯಗಳನ್ನು ಒಳಗೊಂಡಿರುತ್ತದೆ?
ಸ್ಪರ್ಧೆಯ ಎಲ್ಲಾ ವಿಭಾಗಗಳಿಗೆ ತಲಾ ಆರು ವಿಷಯಗಳು ಲಭ್ಯವಿರುತ್ತವೆ.
ನೋಂದಣಿ ಪೂರ್ಣಗೊಂಡ ನಂತರ, ವಿಷಯಗಳ ಪಟ್ಟಿಅನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
5.ನೋಂದಣಿ ಹೇಗೆ ಮಾಡುವುದು?
ನೋಂದಣಿಯನ್ನು ನಮ್ಮ ವೆಬ್‌ಸೈಟ್‌ನಲ್ಲಿ ನೀಡಿರುವ ಪಾವತಿ ಲಿಂಕ್ ಮೂಲಕ ಸುಲಭವಾಗಿ ಪೂರ್ಣಗೊಳಿಸಬಹುದು.
ನಮ್ಮ ವೆಬ್‌ಸೈಟ್‌ನ Pay & Register ಬಟನ್‌ನ್ನು ಆಯ್ಕೆಮಾಡಿ.
ಸುರಕ್ಷಿತ ಪಾವತಿ ಲಿಂಕ್ ಮೂಲಕ ನೋಂದಣಿ ಶುಲ್ಕವನ್ನು ಪಾವತಿಸಿ.
ನಿಮ್ಮ ವಿಭಾಗಕ್ಕೆ ನೀಡಿರುವ ಆರು ವಿಷಯಗಳಲ್ಲೊಂದು ವಿಷಯವನ್ನು ಆಯ್ಕೆಮಾಡಿ.
ಗರಿಷ್ಠ 6 ನಿಮಿಷಗಳ ಅವಧಿಯಲ್ಲಿ ನಿಮ್ಮ ಭಾಷಣ/ಪ್ರಬಂಧದ ವೀಡಿಯೋವನ್ನು ರೆಕಾರ್ಡ್ ಮಾಡಿ.
ಗಡುವಿನೊಳಗೆ ನಿಮ್ಮ ವೀಡಿಯೋ ಸಲ್ಲಿಕೆಯನ್ನು ಅಪ್‌ಲೋಡ್ ಮಾಡಿ.
👉 ವೀಡಿಯೋ ಅಪ್‌ಲೋಡ್ ಲಿಂಕ್ ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ನೋಂದಣಿಯ ನಂತರ ಕಳುಹಿಸಲಾಗುತ್ತದೆ.
6.ನೋಂದಣಿ ಶುಲ್ಕವಿದೆಯೇ?
ಹೌದು, ಪ್ರಕ್ರಿಯೆ/ನೋಂದಣಿ ಶುಲ್ಕವಿದೆ.
ಪ್ರವೇಶ ಶುಲ್ಕ: ಪ್ರತಿಯೊಬ್ಬ ಭಾಗವಹಿಸುವವರಿಗು ₹150/-
ಪಾವತಿ ವಿಧಾನಗಳು: UPI / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / PayPal / Stripe
ಪಾವತಿ ಪೂರ್ಣಗೊಂಡ ನಂತರ, ನಿಮಗೆ ಡಿಜಿಟಲ್ ರಸೀತಿ ನೀಡಲಾಗುತ್ತದೆ.
7.ಪ್ರಶಸ್ತಿಗಳು ಮತ್ತು ಗೌರವಗಳು ಯಾವುವು?
ಪ್ರತಿ ವಿಭಾಗದಲ್ಲೂ — ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳು ಪ್ರದಾನವಾಗುತ್ತವೆ (ಟ್ರೋಫಿಗಳು + ಪ್ರಮಾಣಪತ್ರಗಳು + ನಗದು ಬಹುಮಾನಗಳು).
ಪ್ರತಿ ವಿಭಾಗಕ್ಕೆ 20 ಸಮಾಧಾನಕರ ಪ್ರಶಸ್ತಿಗಳನ್ನು (Consolation Prizes) ನೀಡಲಾಗುತ್ತವೆ.
ಅಸಾಮಾನ್ಯ ಸೃಜನಶೀಲತೆ ಮತ್ತು ಪ್ರಸ್ತುತಿಕರಣಕ್ಕಾಗಿ ವಿಶೇಷ ಗೌರವ ಪ್ರಶಸ್ತಿಗಳನ್ನು ನೀಡಲಾಗುತ್ತವೆ.
ಎಲ್ಲಾ ಸ್ಪರ್ಧಿಗಳಿಗೆ ಪಾಲ್ಗೊಳ್ಳುವಿಕೆ ಇ-ಪ್ರಮಾಣಪತ್ರ ನೀಡಲಾಗುತ್ತದೆ.
8.ಮೂರು ವಿಭಾಗಗಳು ಯಾವುವು?
ಜೂನಿಯರ್ ವಿಭಾಗ
ಅರ್ಹತೆ: 5ನೇ ತರಗತಿಯಿಂದ 10ನೇ ತರಗತಿಯವರೆಗೆ ಇರುವ ವಿದ್ಯಾರ್ಥಿಗಳು
ಷರತ್ತು:ಪ್ರಸ್ತುತ ಅಧ್ಯಯನದಲ್ಲಿರಬೇಕುಸೀನಿಯರ್ ವಿಭಾಗ
ಅರ್ಹತೆ: 11ನೇ ತರಗತಿ ಮತ್ತು ಸಮಾನವಾದ ವಿದ್ಯಾಭ್ಯಾಸ (ಐಟಿಐ, ಡಿಪ್ಲೊಮಾ, ನರ್ಸಿಂಗ್ ಇತ್ಯಾದಿ), ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು
ಷರತ್ತು:ಪ್ರಸ್ತುತ ಅಧ್ಯಯನದಲ್ಲಿರಬೇಕುಸಾಮಾನ್ಯ ವಿಭಾಗ
ಅರ್ಹತೆ: 10 ವರ್ಷಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಯಾರಿಗೂ ಮುಕ್ತ
ಷರತ್ತು: ಪ್ರಸ್ತುತ ಅಧ್ಯಯನದಲ್ಲಿಲ್ಲದವರುಸಮನ್ವಿತ ಮೌಲ್ಯಮಾಪನ ಮತ್ತು ನ್ಯಾಯಸಮ್ಮತ ಗೌರವಕ್ಕಾಗಿ, ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ವಿಷಯಗಳ ಪಟ್ಟಿಯೊಂದಿಗೆ ವಿಶೇಷ ಬಹುಮಾನಗಳು ನಿಗದಿಪಡಿಸಲಾಗಿದೆ.












ನಮ್ಮ ಸ್ಪರ್ಧಿಗಳು ಹೇಳುವುದೇನು ?
ನಮ್ಮ ಪ್ರತಿಭಾವಂತ ಸ್ಪರ್ಧಿಗಳ ಅನುಭವಗಳನ್ನು ಕೇಳಿ.
“ಸ್ಪೀಕ್ ಬೀ ನನ್ನ ಪ್ರತಿಭೆಯನ್ನು ಹೊರಹಾಕಲು ಅಪೂರ್ವ ವೇದಿಕೆಯನ್ನು ನೀಡಿತು. ಸಂಪೂರ್ಣ ಪ್ರಕ್ರಿಯೆಯೂ ಶ್ರದ್ಧಾಶೀಲ ಹಾಗೂ ಪ್ರೇರಣಾದಾಯಕವಾಗಿದ್ದು, ನನ್ನ ವೈಯಕ್ತಿಕ ಬೆಳವಣಿಗೆಗೆ ನಿಜವಾಗಿಯೂ ಅಮೂಲ್ಯವಾಗಿದೆ.”
Akash Madanapalli
Hyderabad
"ಸ್ಪೀಕ್ ಬೀ ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅದ್ಭುತ ವೇದಿಕೆಯನ್ನು ಒದಗಿಸಿತು. ಸಂಪೂರ್ಣ ಪ್ರಕ್ರಿಯೆಯೂ ಪ್ರೇರಣಾದಾಯಕವಾಗಿದ್ದು, ನನ್ನ ವ್ಯಕ್ತಿತ್ವ ಮತ್ತು ಬೆಳವಣಿಗೆಗೆ ಅಮೂಲ್ಯವಾಗಿದೆ."
Niranjan Joshi
New Dehli
★★★★★
★★★★★
Speak Bee
Join our Speech Essay Competition Today!
Contact Us
Mail us
info.paramparastudios@gmail.com
+91-9972681813
© Paramparastudios 2025. All rights reserved.
